New Ration Card Applications : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ ಈ ಲೇಖನದಲ್ಲಿ ತಿಳಿಸುವುದೇನೆಂದರೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿ (New Ration Card Application) ಅರ್ಜಿ ಅನ್ನು ಹಾಕಲು ಸರ್ಕಾರದಿಂದ ಹೊಸ ದಿನಾಂಕ ವನ್ನು ಬಿಡುಗಡೆ ಮಾಡಲಾಗಿದೆ . ಅದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿದ್ದೇನೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ . ನೀವು ಕೂಡ ರೇಷನ್ ಕಾರ್ಡ್ ಗೆ ಅರ್ಜಿ (New Ration Card) ಹಾಕಲು ಕಾಯಿತ್ತಿದ್ದೀರಾ? ಹಾಗಾದರೆ ಈ ಲೇಖನವನ್ನು ಪೂರ್ತಿ ನೋಡಿ ತಿಳಿದುಕೊಳ್ಳಿ.
Table of Contents

ನಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಕಳೆದ ತಿಂಗಳೂ ಅಂದರೆ ಮೇ ತಿಂಗಳಲ್ಲಿ 2 ಇದ 3 ಬಾರಿ ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಮತ್ತು ತಿದ್ದುಪಡಿ (New ration card applications) ಯನ್ನು ಮಾಡಲು ಸರ್ಕಾರವು ಜನರಿಗೆ ಆನ್ಲೈನ್ ಮೂಲಕವು ಅವಕಾಶವನ್ನು ಕೊಟ್ಟಿತ್ತು. ಆದರೆ ಸರ್ವರ್ ಸಮಸ್ಯೆಗಳ ಇರುವುದರಿಂದ ಬಾರಿ ಕೆಲವು ಗಂಟೆಗಳ ಕಾಲ ಮಾತ್ರವು ಅರ್ಜಿಯನ್ನು ಹಾಕಲು ವೆಬ್ಸೈಟ್ ಓಪನ್ ಇರುತ್ತಿತ್ತು. ಹಾಗಾಗಿ ಕೆಲವು ಜನ ಮಾತ್ರ ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಿದ್ದಾರೆ. ಕರ್ನಾಟಕದಲ್ಲಿ ಇನ್ನು ಹಲವು ಕುಟುಂಬಗಳ ಜನರು ಎರಡರಿಂದ ಹಾಗೂ ಮೂರು ವರ್ಷಗಳಿಂದ ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಕಾಯುತ್ತಿದ್ದಾರೆ. ಅಂತಹ ಜನರಿಗೆ ಇದೀಗ ಒಂದು ಹೊಸ ಸಿಹಿ ಸುದ್ದಿ ಬಂದಿದೆ ಅಂತ ಹೇಳ್ಬವುದು.ಹೊಸ ರೇಷನ್ ಕಾರ್ಡ್ ಅರ್ಜಿ ಮತ್ತು ತಿದ್ದುಪಡಿ
ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದು ಗ್ಯಾರಂಟೀ ಯೋಜನೆಗಳನ್ನು ಜಾರಿಗೆ ತಂದ ಮೇಲೆ ರೇಷನ್ ಕಾರ್ಡ್ ಗೆ ಇರುವ ಬೆಲೆ ಕೂಡ ತುಂಬಾ ಹೆಚ್ಚಿತು, ಕರ್ನಾಟಕದಲ್ಲಿ ಇದೀಗ ಹೊಸ ರೇಷನ್ ಕಾರ್ಡ್ ಮಾಡಿಸುವ ಸಲುವಾಗಿ ಜನರು ವರ್ಷಗಳಿಂದ ಒದ್ದಾಡುತ್ತಿದ್ದಾರೆ. ಅಂತವರ ಸಲುವಾಗಿ ಮತ್ತೆ ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಹಾಗೂ ತಿದ್ದುಪಡಿ ಮಾಡಲು ಅವಕಾಶ ನೀಡುವುದಾಗಿ ಮಾಹಿತಿ ಬಂದಿದೆ ಅದು ಯಾವಾಗ? ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಬೇಕಾಗುವ ದಾಖಲೆಗಳು ಏನು , ಮತ್ತು ಹೇಗೆ ಅರ್ಜಿ ಹಾಕಬೇಕು ? ಎಂಬ ಮಾಹಿತಿಗಾಗಿ ಈ ಲೇಖನ ಪೂರ್ತಿ ಓದಿ .
ಕರ್ನಾಟಕದಲ್ಲಿ ರೇಷನ್ ಕಾರ್ಡ್ ಮಾಡಿಸಲು ಬಹಳ ಜನ ಕಾಯುತ್ತಿದ್ದಾರೆ ಅದಲ್ಲದೆ ಸರ್ಕಾರವು ಯಾವುದೇ ನೋಟಿಸ್ ಇಲ್ಲದೆ ಹೊಸ ರೇಷನ್ ಅರ್ಜಿ ಹಾಕಲು ಅವಕಾಶ ಕೊಡುತ್ತದೆ. ಆದ್ದರಿಂದ ನೀವು ಅರ್ಜಿ ಅನ್ನು ಹಾಕಲು ಅವಕಾಶವನ್ನು ಕೊಟ್ಟ ತಕ್ಷಣ ಅರ್ಜಿ ಹಾಕಲು ಈ ಕೆಳಗಿನ ದಾಖಲೆಗಳನ್ನು ರೆಡಿಯನ್ನು ಮಾಡಿಕೊಡು ಇಟ್ಟುಕೊಳ್ಳಿ ಹಾಗೂ ರೇಷನ್ ಕಾರ್ಡ್ ಅರ್ಜಿ ಬಿಟ್ಟ ಮಾಹಿತಿ ತಕ್ಷಣ ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ ಗೆ ಜಾಯಿನ್ ಆಗಿರಿ .
New ration card applications ಹೊಸ ರೇಷನ್ ಕಾರ್ಡ್ ಅರ್ಜಿ ಯಾವಾಗ ಆರಂಭ?
ನಮಗೆ ಖಾಸಗಿ ಮಾಧ್ಯಮಗಳ ಮೂಲಕವು ಬಂದಿರುವತ ಮಾಹಿತಿ ಏನೆಂದರೆ ಈ ಹಿಂದೆ ಒಂದು ಅಥವಾ ಎರಡು ವರ್ಷಗಳ ಹಿಂದೆ ರೇಷನ್ ಕಾರ್ಡ್ ಗೆ ಅರ್ಜಿ ಹಾಕಿದವರ ದಾಖಲೆಗಳ ಪರಿಶೀಲನೆಯು ಮುಗಿದಿದೆ. ಈ ಪರಿಶೀಲಿಸಿದ ರೇಷನ್ ಕಾರ್ಡ್ ಗಳನ್ನು ಮೊದಲು ವಿತರಣೆಯನ್ನು ಮಾಡಲಾಗುತ್ತ.
ರೇಷನ್ ಕಾರ್ಡ್ ವಿತರಣೆ ಮುಗಿದ ನಂತರ ಮತ್ತೆ ಹೊಸ ರೇಷನ್ ಅರ್ಜಿ ಹಾಕಲು ಮತ್ತು ತಿದ್ದುಪಡಿ (New ration card applications) ಅವಕಾಶವು ನೀಡಲಾಗುತ್ತದೆ. ಒಟ್ಟಿನಲ್ಲಿ ಜೂನ್ ತಿಂಗಳು ಮುಗಿಯುವುದರೊಳಗೆ ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಸರ್ಕಾರವು ಅವಕಾಶವನ್ನು ನೀಡುವುದಾಗಿ ಮಾಹಿತಿಯು ತಿಳಿದು ಬಂದಿದೆ.
(New ration card applications) ರೇಷನ್ ಕಾರ್ಡ್ ಅರ್ಜಿ ಹಾಕಲು ಬೇಕಾಗುವ ದಾಖಲೆಗಳು?
ರೇಷನ್ ಕಾರ್ಡ್ ಗೆ ಅರ್ಜಿಯನ್ನು ಇದೆ ತಿಂಗಳು ಯಾವ ದಿನಾಂಕದಂದು ಆದರೂ ಬಿಡಬಹುದು ಆದ್ದರಿಂದ ನೀವು ಮೊದಲೇ ಈ ದಾಖಲೆಗಳನ್ನು ರೆಡಿ ಮಾಡಿಕೊಡು ಇಟ್ಟುಕೊಳ್ಳಿ.
- ಮೊಬೈಲ್ ನಂಬರ್ ಬೇಕು
- ಕುಟುಂಬದವರ ಆಧಾರ್ ಕಾರ್ಡ್ ಬೇಕು
- ಕುಟುಂಬದವರ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಬೇಕು
- ಕುಟುಂಬದ ವಾಸಸ್ಥಳ ಪ್ರಮಾಣ ಪತ್ರ ಬೇಕು
- ಜನನ ಪ್ರಮಾಣ ಪತ್ರ ( 6 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಮಾತ್ರ) ಬೇಕು
ನಾವು ಮೇಲೆ ತಿಳಿಸಿದ ಈ ಎಲ್ಲಾ ದಾಖಲೆಗಳು ಇದ್ದರೆ ನೀವು ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಬಿಟ್ಟ ತಕ್ಷಣ ಆನ್ಲೈನ್ ಸೆಂಟರ್ ಗೆ ಭೇಟಿ ನೀಡಿಕೊಡು ಸುಲಭವಾಗಿ ಅರ್ಜಿ ಹಾಕಬಹುದು.
(New ration card applications) ರೇಷನ್ ಕಾರ್ಡ್ ಅರ್ಜಿ ಹಾಕುವುದು ಹೇಗೆ?
ನೀವು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಬೇಕು ಅಥವಾ ತಿದ್ದುಪಡಿ ಮಾಡಬೇಕು ಎಂದು ಕೊಂಡರೆ ನೀವು ನಿಮ್ಮ ಹತ್ತಿರದತ CSC ಕೇಂದ್ರ ಹಾಗೂ ಕರ್ನಾಟಕ ಒನ್ ಕೇಂದ್ರ ಗ್ರಾಮ ಒನ್ ಕೇಂದ್ರ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ .ಎಲ್ಲಾ ದಾಖಲೆಗಳನ್ನು ನೀಡಿ ಸುಲಭವಾಗಿ ಅರ್ಜಿಯನ್ನು ಹಾಕಬವುದು ಅಥವಾ ತಿದ್ದುಪಡಿಯನ್ನು ಮಾಡಬಹುದು.
ನೀವು ನಿಮ್ಮ ಮೋಬೈಲ್ ಅಲ್ಲಿ ಅರ್ಜಿ ಹಾಕಲು ಈ ಲಿಂಕ್ ಮೇಲೆ ಒತ್ತಿ – https://ahara.kar.nic.in/public_new_rc/app_offline_current.htm
ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಕಾಯುತ್ತಿರುವವರಿಗೆ ಸರ್ಕಾರದಿಂದ ಬಂದ ಹೊಸ ದಿನಾಂಕ ಮತ್ತು ಅರ್ಜಿ ಹಾಕಲು ರೆಡಿ ಮಾಡಿ ಇಟ್ಟುಕೊಳ್ಳಬೇಕಾದ ಎಲ್ಲಾ ದಾಖಲೆಗಳು ಹಾಗೂ ಅರ್ಜಿ ಹೇಗೆ ಹಾಕಬೇಕು ಎನ್ನುವ ಮಾಹಿತಿಯು ಈ ಲೇಖನದಲ್ಲಿ ನೀಡಿದ್ದೇವೆ ಎಂದು ನಾವು ಭಾವಿಸುತ್ತೇನೆ. ಧನ್ಯವಾದಗಳು…
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು