Get Birth and death certificate online | ಜನನ ಪ್ರಮಾಣ ಪತ್ರ ಮತ್ತು ಮರಣ ಪ್ರಮಾಣ ಪತ್ರ ಮೊಬೈಲ್ ಮೂಲಕ ಪಡೆಯುವ ವಿಧಾನ | ಮಾಹಿತಿ ಇಲ್ಲಿದೆ

Get Birth and death certificate online | ಜನನ ಪ್ರಮಾಣ ಪತ್ರ ಮತ್ತು ಮರಣ ಪ್ರಮಾಣ ಪತ್ರ ಮೊಬೈಲ್ ಮೂಲಕ ಪಡೆಯುವ ವಿಧಾನ | ಮಾಹಿತಿ ಇಲ್ಲಿದೆ 2024 FREE
Spread the love

Get Birth and death certificate online : ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ ಜನನ ಮರಣ ಪ್ರಮಾಣ ಪತ್ರ (Birth death certificate)ಪಡೆಯಲು ಈಗ ದೂರ ಹೋಗಬೇಕಿಲ್ಲ. ನಿಮ್ಮ ಹತ್ತಿರದ ಗ್ರಾಮ ಪಂಚಾಯತ್ ನಲ್ಲೇ ಪಡೆಯಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಜನರು ಇನ್ನೂಮುಂದೆ ಪದೆ ಪದೆ ಕೆಲಸ ಬಿಟ್ಟು ಕಚೇರಿಗಳಿಗೂ ಅಲೆಯಬೇಕಿಲ್ಲ. ನೋಂದಣಿಗೂ ಎಲ್ಲಿಯೂ ಹೋಗಬೇಕಿಲ್ಲ. ಹಿಂದೆಲ್ಲಾ ಜನನ ಪ್ರಮಾಣ ಪತ್ರ ಅಥವಾ ಮರಣ ಪ್ರಮಾಣ ಪತ್ರ ಪಡೆಯಬೇಕೆಂದರೆ ನಾಡ ಕಚೇರಿಯಿಂದ ತಹಶೀಲ್ದಾರ ಕಚೇರಿಯವರೆಗೂ ಅಲೆದಾಡಬೇಕಾಗುತ್ತಿತ್ತು. ಆದರೂ ಸರಿಯಾದ ಸಮಯಕ್ಕೆ ಸಿಗುತ್ತಿರಲಿಲ್ಲ. ಹಾಗಾಗಿ ಸರ್ಕಾರವು ಈ ಕ್ರಮ ಕೈಗೊಂಡಿದೆ. ಈಗ ಸಾರ್ವಜನಿಕರು ತಮ್ಮ ಗ್ರಾಮಗಳಲ್ಲೇ ಜನನ ಮರಣ ಪ್ರಮಾಣ ಪತ್ರ ವನ್ನು ಪಡೆಯಬಹುದು.

Get Birth and death certificate online | ಜನನ ಪ್ರಮಾಣ ಪತ್ರ ಮತ್ತು ಮರಣ ಪ್ರಮಾಣ ಪತ್ರ ಮೊಬೈಲ್ ಮೂಲಕ ಪಡೆಯುವ ವಿಧಾನ | ಮಾಹಿತಿ ಇಲ್ಲಿದೆ 2024 FREE

ಡಿಜಿಟಲ್ ಸಹಿ ಆಧಾರಿತ ಜನನ, ಮರಣ ನೋಂದಣಿ ಪ್ರಮಾಣ ಪತ್ರ (Birth death certificate online)ವನ್ನು ಗ್ರಾಮ ಪಂಚಾಯತಿಯಲ್ಲೇ ನೀಡಲಾಗುತ್ತದೆ. ಜನನ ಹಾಗೂ ಮರಣ ಸಂಭವಿಸಿದ 30 ದಿನದ ಒಳಗೆ ನೋಂದಾಯಿಸಿ ಇ-ಜನ್ಮ ತಂತ್ರಾಂಶದ ಮೂಲಕ ಪ್ರಮಾಣ ಪತ್ರ ವಿತರಿಸಲು ಡಿಜಿಟಲ್ ಸಹಿ ಬಳಸಲಾಗುವುದು.

ರಾಜ್ಯದಲ್ಲಿ ಜುಲೈ 1 ರಿಂದ ಜಾರಿಗೆ ಬರುವಂತೆ ಜನನ ಅಥವಾ ಮರಣ ಘಟನೆ ಸಂಭವಿಸಿದ 30 ದಿನಗಳ ಒಳಗಾಗಿ ನೋಂದಣಿ ಮಾಡಿಕೊಡು ಪ್ರಮಾಣ ಪತ್ರ ವಿತರಿಸುವ ಅಧಿಕಾರವನ್ನುಗ್ರಾಮ ಪಂಚಾಯತಿ ಕಾರ್ಯದರ್ಶಿಗಳಿಗೆ ನೀಡಿ ಜನನ ಮರಣಗಳ ಮುಖ್ಯ ನೋಂದಣಾಧಿಕಾರಿ ಸುತ್ತೋಲೆ ಯನ್ನು ಹೊರಡಿಸಿದ್ದಾರೆ.

ಸುತ್ತೋಲೆ ಅನ್ವಯ ಜನನ,ಮರಣ ಘಟನೆಗಳು ಸಂಭವಿಸಿದ 30 ದಿನಗಳವರೆಗಿನ ಪ್ರಕರಣಗಳಲ್ಲಿ ನೋಂದಾಯಿಸಲು ಪಂಚಾಯತಿ ಕಾರ್ಯದರ್ಶಿ ಹಾಗೂ 30 ದಿನಗಳಿಂದ ಒಂದು ವರ್ಷದವರೆಗಿನ ಪ್ರಕರಣಗಳಲ್ಲಿ ಗ್ರಾಮ ಆಡಳಿತ ಅಧಿಕಾರಿಗಳನ್ನು ಜನನ, ಮರಣ ನೋಂದಣಾಧಿಕಾರಿಗಳನ್ನಾಗಿ ಆದೇಶವನ್ನು ಹೊರಡಿಸಲಾಗಿದೆ.

ಜನನ ಮರಣ ನಡೆದ 21 ದಿನಗಳ ಒಳಗಾಗಿ ನೋಂದಣಿ ಮಾಡಿ ಉಚಿತವಾಗಿ ಒಂದು ಪ್ರಮಾಣ ಪತ್ರವನ್ನು ವಿತರಿಸಬೇಕು. 21 ದಿನಗಳಿಂದ 30 ದಿನಗಳ ನಡುವೆ ನೋಂದಣಿ ಮಾಡಿದರೆ 2 ರೂಪಾಯಿ ವಿಳಂಬ ಶುಲ್ಕ, 30 ದಿನಗಳಿಂದ ಒಂದು ವರ್ಷದ ವರೆಗಿನ ಪ್ರಕರಣಗಳಲ್ಲಿ 5 ರೂಪಾಯಿ ಶುಲ್ಕ ಪಡೆದು ನೋಂದಣಿಯನ್ನು ಮಾಡಬಹುದು.

ರ್ನಾಟಕ ಜನನ, ಮರಣ ನೋಂದಣಿ ನಿಯಮಗಳ ಪ್ರಕಾರ 1 ವರ್ಷದ ಬಳಿಕ ನೋಂದಣಿ ಮಾಡಿದರೆ ಪ್ರಥಮ ದರ್ಜೆ ದಂಡಾಧಿಕಾರಿ ಅವರ ಆದೇಶದ ಜತೆಗೆ 10 ರೂಪಾಯಿ ವಿಳಂಬ ಶುಲ್ಕ ಪಡೆದು ನೋಂದಣಿಯನ್ನು ಮಾಡಬೇಕು.

Get Birth and death certificate online ಜನನ ಮತ್ತು ಮರಣ ಪ್ರಮಾಣ ಪತ್ರ ಆನ್ಲೈನ್ ನಲ್ಲೇ ಪಡೆಯಿರಿ

ಜನನ ಮರಣ ಪ್ರಮಾಣ ಪತ್ರ ಆನ್ಲೈನ್ ನಲ್ಲಿ ಪಡೆಯಲು

https://ejanma.karnataka.gov.in

ಲಿಂಕ್ ಮೇಲೆ ಕ್ಲಿಕ್ ಮಾಡಿಕೊಳ್ಳಿ . ಅಲ್ಲಿ ನಿಮಗೆ ಬರ್ತ್ ಸರ್ಟಿಫಿಕೇಟ್ ಬೇಕೋ ಅಥವಾ ಡೆತ್ ಸರ್ಟಿಫಿಕೇಟ್ ಬೇಕೋ ಎಂಬುದನ್ನು ಆಯ್ಕೆ ಮಾಡಿಕೊಳ್ಳಿ. ಯಾವ ಸರ್ಟಿಫಿಕೇಟ್ ಬೇಕೋ ಅದರ ಮೇಲೆ ಕ್ಲಿಕ್ ಮಾಡಿಕೊಳ್ಳಿ. ಬರ್ತ್ ಸರ್ಟಿಫಿಕೇಟ್ ಬೇಕಾದರೆ ನೋಂದಣಿ ಸಂಖ್ಯೆ ಮತ್ತು ಹುಟ್ಟಿದ ದಿನಾಂಕ ಹಾಕಿ ಕ್ಯಾಪ್ಚ್ಯಾ ಕೋಡ್ ಹಾಕಿ ಬರ್ತ್ ಸರ್ಟಿಫಿಕೇಟ್ ನ್ನು ಪಡೆದುಕೊಳ್ಳಬಹುದು.

ರಾಜ್ಯಾದ್ಯಂತ 5950 ಗ್ರಾಮ ಪಂಚಾಯತಿಗಳಿವೆ. ಎಲ್ಲಾ ಪಂಚಾಯತಿಗಳಲ್ಲೂ ಈ ಸೇವೆ ಕಲ್ಪಿಲಾಗುವುದು. ಜೊತೆಗೆ, ವಿವಾಹ ನೋಂದಣಿಯೂ ಗ್ರಾಮ ಪಂಚಾಯತಿಗಳಲ್ಲೇ ನಡೆಯಲಿದೆ ಎಂದು ಮಾಹಿತಿಯನ್ನು ನೀಡಲಾಗಿದೆ. ಈ ವರೆಗೆ ವಿವಾಹ ನೋಂದಣಿ ಕಾರ್ಯ ಕೇವಲ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲೇ ನಡೆಯುತ್ತಿತ್ತು. ಪಿಡಿಓಗಳನ್ನು ಜನನ ಮರಣ ಪತ್ರ ವಿತರಣಾಧಿಕಾರಿಗಳನ್ನಾಗಿ ನೇಮಿಸುವ ಬದಲು ಗ್ರಾಮ ಪಂಚಾಯತಿ ಕಾರ್ಯದರ್ಶಿಯವರನ್ನು ಉಪ ನೋಂದಣಾಧಿಕಾರಿಯನ್ನಾಗಿ ಕೂಡ ನೇಮಿಸಲಾಗಿದೆ.

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

Get Birth and death certificate online FAQ

Leave a Reply

Your email address will not be published. Required fields are marked *